Flash News

welcome to Chippar school blog....ಚಿಪ್ಪಾರು ಶಾಲಾ ಬ್ಲಾಗಿಗೆ ಸ್ವಾಗತ..... .. FLASH NEWS.....ONAM EXAMINATION STARTS ON 30.08.2016..................... H.A.U.P.SCHOOL CHIPPAR......... welcome to chippar school blog...................

Sunday 23 July 2017

ಚಾಂದ್ರ ದಿನಾಚರಣೆ.

 ದಿನಾಂಕ 21-07-2017 ರಂದು ಚಾಂದ್ರ ದಿನವನ್ನು ಆಚರಿಸಲಾಯಿತು.
ಏಳನೇ ತರಗತಿಯ ವಿದ್ಯಾರ್ಥಿಯಾದ ರಜತ್ ಚಾಂದ್ರಯಾನಕ್ಕೆ ಸಂಬಂಧಿಸಿದ ಪ್ರಬಂಧ ಮಂಡಿಸಿದನು.
 ಏಳನೇ ತರಗತಿಯ ವಿದ್ಯಾರ್ಥಿ ಹೇಮಂತ್ ಪ್ರಬಂಧ ಮಂಡಿಸಿದನು.
ವಿದ್ಯಾರ್ಥಿಗಳಿಗೆ ಚಂದ್ರಯಾನದ ವಿಡಿಯೋ ಪ್ರದರ್ಶಿಸಲಾಯಿತು.ಬಳಿಕ ರಸಪ್ರಶ್ನೆ ನಡೆಸಲಾಯಿತು.

ತರಕಾರಿ ಬೀಜ ವಿತರಣೆ

                         ದಿನಾಂಕ 20-07-2017 ರಂದು ವಿಧ್ಯಾರ್ಥಿಗಳಿಗೆ ತರಕಾರಿ ಬೀಜ ವಿತರಿಸಲಾಯಿತು.

ಮಂತ್ರಿಮಂಡಲ ರೂಪೀಕರಣ

 17-07-2017 ರಂದು ಶಾಲಾ  ಮಂತ್ರಿಮಂಡಲ ರಚಿಸಲಾಯಿತು.
ಸ್ಪೀಕರ್ ಪ್ರಧಾನಮಂತ್ರಿ ವಿರೋಧ ಪಕ್ಷದ ನಾಯಕಿ  ವಿವಿಧ ಮಂತ್ರಿಗಳು ಹಾಗೂ ಸಹಾಯಕರನ್ನು ಆರಿಸಲಾಯಿತು.
ಮಂತ್ರಿಗಳಾಗಿ ಆಯ್ಕೆಯಾದವರಿಗೆ ಪ್ರಮಾಣವಾಚನ ಬೋಧಿಸಲಾಯಿತು .

ವಿವಿದ ಮಂತ್ರಿಗಳು ಹಾಗೂ ಸಹಾಯಕ ಸಚಿವರೊಂದಿಗೆ ಶಾಲಾ ಅಧ್ಯಾಪಕರು.

ವಿದ್ಯಾರಂಗ ಮತ್ತು ವಿವಿಧ ಕ್ಲಬ್ ಗಳ ಉದ್ಘಾಟನೆ.

 ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಹಾಗೂ ವಿವಿದ ಕ್ಲಬ್ ಗಳ ಉದ್ಘಾಟನೆಯು ದಿನಾಂಕ 11-07-2017 ನೇ ಮಂಗಳವಾರ ನಡೆಯಿತು.
 ವಿದ್ಯಾರ್ಥಿಯಾದ ಶಶಾಂಕ್ ಅತಿಥಿಗಳನ್ನು ಸ್ವಾಗತಿಸಿದನು.
ಮುಖ್ಯ ಅತಿಥಿಗಳಾದ ಶ್ರೀ ಕೃಷ್ಣ ಶೆಟ್ಟಿಗಾರ್ ಔಪಚಾರಿಕವಾಗಿ ಉದ್ಘಾಟಿಸಿದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ ಮುಖ್ಯೋಪಾಧ್ಯಾಯರು ಕ್ಲಬ್ ಗಳ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದರೆ ಮಾತ್ರವೇ ಅದರಿಂದ ಪ್ರಯೋಜನವನ್ನು ಪಡೆಯಬಹುದು ಎಂದರು.
ಹಿರಿಯ ಅಧ್ಯಾಪಕರಾದ ಚಂದ್ರಶೇಖರ ಭಟ್ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಹಿರಿಯ ಅಧ್ಯಾಪಕರಾದ ಶೇಖರ ಶೆಟ್ಟಿ ಕಾರ್ಯಕ್ರಮಕ್ಕೆ ಶುಭಕೋರಿದರು.
 ಸುದರ್ಶನ ಕೃಷ್ಣ ವಂದಿಸಿದನು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಶತಮಾನೋತ್ಸವ ಸಮಿತಿ ರೂಪೀಕರಣ ಸಭೆ.

ಶಾಲಾ ಶತಮಾನೋತ್ಸವ ರೂಪೀಕರಣ ಸಭೆಯು ದಿನಾಂಕ 2-07-2017 ನೇ ರವಿವಾರ ನಡೆಯಿತು.ಶತಮಾನೋತ್ಸವ ನಡೆಸುವುದರ ಬಗ್ಗೆ ಚರ್ಚಿಸಲಾಯಿತು.ವಿವಿಧ ಸಮಿತಿಗಳನ್ನು ರೂಪಿಸಲಾಯಿತು.

ರಕ್ಷಕ ಶಿಕ್ಷಕ ಸಂಘದ ಮಹಾಸಭೆ

 ದಿನಾಂಕ 30-06-2017 ನೇ ಶುಕ್ರವಾರ ಮಧ್ಯಾಹ್ನ್ನ 3-00 ಗಂಟೆಗೆ ರಕ್ಷಕ ಶಿಕ್ಷಕ ಸಂಘದ ಸಭೆಯು ಜರುಗಿತು.
 ಶಾಲಾ ಮುಖ್ಯೋಪಾಧ್ಯಾಯರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.
 2017 18 ನೇ ಸಾಲಿನ ಹೊಸ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಕಳೆದ ವರ್ಷದ ಶಾಲಾ ಚಟುವಟಿಕೆಗಳ ವರದಿಯನ್ನು ಹಿರಿಯ ಅಧ್ಯಾಪಕರಾದ ಶ್ರೀ ಶೇಖರ ಶೆಟ್ಟಿ ಮಂಡಿಸಿದರು.
ಹಿರಿಯ ಅಧ್ಯಾಪಕರಾದ ಶ್ರೀ ಚಂದ್ರಶೇಖರ ಭಟ್ ವಂದಿಸಿದರು.

ಶಾಲಾ ಚುನಾವಣೆ

ದಿನಾಂಕ  29-06-2017 ರಂದು ಶಾಲಾ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯಿತು. ಏಳನೇ ತರಗತಿಯ ಶಶಾಂಕ್ ಮತ್ತು ಕದೀಜಮ್ಮನಾಯಕನ ಸ್ಥಾನಕ್ಕೆ ಸ್ಪರ್ಧಿಸಿದ್ದರು.
 ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಯಿತು.ಮಕ್ಕಳು ಮತ ಚಲಾಯಿಸಲು ಸಾಲಿನಲ್ಲಿ ನಿಂತರು.
 ಮತದಾನದ ಎಲ್ಲ ಪ್ರಕ್ರಿಯೆಗಳನ್ನು ಮಕ್ಕಳೇ ನಿರ್ವಹಿಸಿದರು.ಶಾಲಾ ನಾಯಕನಾಗಿ ಶಶಾಂಕ್ ಆಯ್ಕೆ ಯಾದನು.

ವಾಚನವಾರ ಸಮಾರೋಪ ಸಮಾರಂಭ.

 ದಿನಾಂಕ 26-06-17 ನೇ ಸೋಮವಾರ ದಂದು ವಾಚನ ವಾರ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾದ ಶ್ರೀ ಶ್ರೀಪತಿ ಭಟ್ ಅವರು ಕವನವನ್ನು ಹಾಡಿ ಮಕ್ಕಳನ್ನು ರಂಜಿಸಿದರು.
 ಶ್ರೀಮತಿ ಪ್ರೇಮಲತಾ ಸ್ವಾಗತಿಸಿದರು.
ಮಕ್ಕಳಿಂದ ರಚಿತವಾದ ಹಸ್ತಪತ್ರಿಕೆಯನ್ನು ಮುಖ್ಯ ಅತಿಥಿಗಳು ಬಿಡುಗಡೆಗೊಳಿಸಿದರು. ಶ್ರೀಮತಿ ಜಯಲಕ್ಷ್ಮಿ ವಂದಿಸಿದರು.

Saturday 22 July 2017

ವಿಶ್ವ ಯೋಗ ದಿನಾಚರಣೆ

ದಿನಾಂಕ 21-06-20017  ರಂದು ವಿಶ್ವ ಯೋಗ ದಿನಾಚರಣೆ ಯನ್ನು ಆಚರಿಸಲಾಯಿತು.ಮುಖ್ಯೋಪಾಧ್ಯಾಯರು ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗದ ಮಹತ್ವವನ್ನು ತಿಳಿಸಿದರು.ದೈಹಿಕ ಶಿಕ್ಷಕರಾದ ಶ್ರೀ ಮೊಯ್ದು ಹಲವು ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಿದರು.ಶ್ರೀ ಚಂದ್ರಶೇಖರ ಭಟ್ ಸಹಾಯವಿತ್ತರು.
 ವಿದ್ಯಾರ್ಥಿಗಳೂ ಯೋಗಾಸನವನ್ನು ಪ್ರದರ್ಶಿಸಿದರು.
 ದೈಹಿಕ ಶಿಕ್ಷಕರ ಯೋಗದ ಒಂದು ಭಂಗಿ.
 ಏಳನೇ ತರಗತಿಯ ವಿದ್ಯಾರ್ಥಿಯಾದ ಹರ್ಷಿತ್ .ಕೆ. ಯೋಗಾಸನವನ್ನು ಪ್ರದರ್ಶಿಸಿದನು.
ಶಾಲಾ ಅಧ್ಯಾಪಕರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವಾಚನ ಸಪ್ತಾಹ ಉದ್ಘಾಟನಾ ಸಮಾರಂಭ.

 ದಿನಾಂಕ 20-06-20017  ವಾಚನ ವಾರ ಉದ್ಘಾಟನಾ  ಸಮಾರಂಭ ನಡೆಯಿತು.ಶಾಲಾ ಮುಖ್ಯೋಪಾಧ್ಯಾಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
 ಶ್ರೀಮತಿ ಪ್ರೇಮಲತಾ ಇವರು ಪ್ರಸ್ತಾವನೆಯೊಂದಿಗೆ  ಅತಿಥಿಗಳನ್ನು ಸ್ವಾಗತಿಸಿದರು.
 ಮುಖ್ಯೋಪಾದ್ಯಾಯರಾದ ಶ್ರೀ ದಾಸಪ್ಪ .ಕೆ.ಓದುವಿಕೆಯ ಮಹತ್ವದ ಬಗ್ಗೆ ತಿಳಿಸಿದರು.ಹಿರಿಯ ಅಧ್ಯಾಪಕರಾದ ಶ್ರೀ ಚಂದ್ರಶೇಖರ ಭಟ್ ಪಿ ಯನ್ ಪಣಿಕ್ಕರ್ ರ ಜೀವನದ ಬಗ್ಗೆ ಮಾಹಿತಿ ನೀಡಿದರು.ಶ್ರೀಮತಿ ಶೈಲಿನಿ ವಂದಿಸಿದರು.
ಬಳಿಕ ಪುಸ್ತಕಗಳ ಪ್ರದರ್ಶನ ನಡೆಸಲಾಯಿತು.

ವಿಶ್ವ ಪರಿಸರ ದಿನಾಚರಣೆ

ದಿನಾಂಕ 5-06-2017 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.ಶಾಲಾ ಪರಿಸರದಲ್ಲಿ ಗಿಡಗಳನ್ನು ಔಷಧೀಯ ಸಸ್ಯಗಳನ್ನು ಮಕ್ಕಳು ನೆಟ್ಟರು.
 ಪರಿಸರವನ್ನು ರಕ್ಷಿಸಲು ಮಳೆ ನೀರನ್ನು ಸಂಗ್ರಹಿಸುವ ಸಲುವಾಗಿ ಮಕ್ಕಳು ಇಂಗು ಗುಂಡಿ ನಿರ್ಮಾಣ ಮಾಡಿದರು.
ಪರಿಸರ ಸಂರಕ್ಷಣೆಯ ಘೋಷಣೆಗಳೊಂದಿಗೆ ಮೆರವಣಿಗೆ ನಡೆಸಿದರು.

ಶಾಲಾ ಪ್ರವೇಶೋತ್ಸವ.

ದಿನಾಂಕ 1-06-2017  ನೇ ಗುರುವಾರ ಶಾಲಾ ಪ್ರವೇಶೋತ್ಸವವು ವಿಜೃಂಭಣೆಯಿಂದ ಜರುಗಿತು. ಶಾಲಾ ಮುಖ್ಯೋಪಾಧ್ಯಾಯರು ಪ್ರಸ್ತಾವನೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು.
ಮಾತೃ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಜಯಲಕ್ಷ್ಮಿ ಅಕ್ಷರ ದೀಪವನ್ನು ಬೆಳಗಿಸಿದರು.
ಶಾಲಾ ಹಳೆವಿದ್ಯಾರ್ಥಿನಿಯಾದ ಶ್ರೀಮತಿ ವೀಣಾ ಪ್ರತಾಪಸಿಂಹ ಅವರು ಒಂದನೇ ತರಗತಿಯ ಮಕ್ಕಳಿಗೆ ಕಲಿಕೋಪಕರಣಗಳನ್ನುಕೊಡುಗೆಯಾಗಿ ನೀಡಿದರು.

ನು ಗಣಿತ ದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಿಬಿರದಲ್ಲಿ ಪಾಲ್ಗೊಂಡ ಹೇಮಂತ್ .ಕೆ .ಇವನನ್ನು ಮುಖ್ಯ ಅತಿಥಿಗಳಾದ ಶ್ರೀ ಸೀತಾರಾಮ ಬಲ್ಲಾಳ್ ಇವರು ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.
ಹಿರಿಯ ಅಧ್ಯಾಪಕರಾದ ಶ್ರೀ ಶೇಖರ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.